ಗೂಗಲ್ ಫೆಲೋಶಿಪ್: ಗೂಗಲ್ ವಿಶೇಷ ಫೆಲೋಶಿಪ್ ಪ್ರೋಗ್ರಾಂ ಅನ್ನು ಪ್ರಕಟಿಸಿದ್ದು, ಇದರಲ್ಲಿ ಭಾಗವಹಿಸುವವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳವರೆಗೆ ಸ್ಟೈಫಂಡ್ ಪಡೆಯುವ ಅವಕಾಶವಿದೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಈ ವಿಶೇಷ ಫೆಲೋಶಿಪ್ ಕಾರ್ಯಕ್ರಮವು ಕೇವಲ ಅನುಭವವನ್ನು ಮಾತ್ರವಲ್ಲದೆ, ಆರ್ಥಿಕವಾಗಿಯೂ ವಿದ್ಯಾರ್ಥಿಗಳಿಗೆ ದೊಡ್ಡ ಬೆಂಬಲ ನೀಡಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಪದವಿ (UG), ಸ್ನಾತಕೋತ್ತರ ಪದವಿ (PG) ಅಥವಾ ಪಿಎಚ್ಡಿ ವ್ಯಾಸಂಗ ಮಾಡುತ್ತಿರಬೇಕು. ಪೂರ್ಣ ಸಮಯದ (Full-time) ಅಥವಾ ಅರೆಕಾಲಿಕ (Part-time) ವಿದ್ಯಾರ್ಥಿಯಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಯೋಮಿತಿ:
- ಜನವರಿ 1, 2026 ರ ವೇಳೆಗೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
- ಇಂಟರ್ನೆಟ್ ತಂತ್ರಜ್ಞಾನ ಮತ್ತು ನೀತಿಗಳ ಬಗ್ಗೆ ಆಸಕ್ತಿ ಇರಬೇಕು.
- ಉತ್ತಮ ಸಂಶೋಧನಾ ಮನೋಭಾವ, ಬರವಣಿಗೆ ಮತ್ತು ಸಂವಹನ ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಸ್ಟೈಫಂಡ್ ವಿವರ:
ಪೂರ್ಣ ಸಮಯ (ವಾರಕ್ಕೆ 40 ಗಂಟೆ): ಸುಮಾರು $12,000 (ಅಂದಾಜು ₹10 ಲಕ್ಷ).
ಅರೆಕಾಲಿಕ (ವಾರಕ್ಕೆ 20 ಗಂಟೆ): ಸುಮಾರು $6,000 (ಅಂದಾಜು ₹5 ಲಕ್ಷ).
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 9, 2026 (ಮಧ್ಯಾಹ್ನ 12:00 ರೊಳಗೆ).
ಪ್ರವೇಶದ ಷರತ್ತು:
ಆಗಸ್ಟ್ 30, 2026 ರೊಳಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು.
ಗಮನಿಸಿ:
ಈ ಹಿಂದೆ ಗೂಗಲ್ನ ಈ ಫೆಲೋಶಿಪ್ನಲ್ಲಿ ಭಾಗವಹಿಸಿದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಗೂಗಲ್ನ ಅಧಿಕೃತ ವೃತ್ತಿ ಪೋರ್ಟಲ್ (Google Careers Portal) ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ:
ಅಭ್ಯರ್ಥಿಗಳು ಅಮೆರಿಕದಲ್ಲಿ ಕೆಲಸ ಮಾಡಲು ಕಾನೂನುಬದ್ಧ ಅನುಮತಿ (Work Authorization) ಹೊಂದಿರಬೇಕು. ವೀಸಾ ಪ್ರಕ್ರಿಯೆಗೆ ಗೂಗಲ್ ಯಾವುದೇ ನೆರವು ನೀಡುವುದಿಲ್ಲ.

