ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ ಆರು ಮಂದಿ ಯುವಕರನ್ನು ಕಂಕನಾಡಿ ನಗರ ಹಾಗೂ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಿರಣ್ ಪ್ರಸಾದ್ (22), ಸಲ್ಮಾನ್ (18), ಪ್ರಜ್ವಲ್ (23), ಕಾರ್ತಿಕ್ (24), ಪ್ರಜ್ವಲ್ ಅಶ್ವತ್ಥ ವೇಗಸ್ (25) ಮತ್ತು ಅನ್ಸಿಲ್ ಗ್ರಿಪ್ಥ್ ಅಲ್ಫ್ರೇಡ್ (24) ಎಂದು ತಿಳಿದು ಬಂದಿದೆ.
ಮಾದಕ ವಸ್ತು ಸೇವನೆ ಮಾಡಿ ಅಡ್ಯಾರ್ ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರ್ತಿಕ್ ಮತ್ತು ಪ್ರಜ್ವಲ್ರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಡ್ಯಾರ್ ಪದವಿನ ಅಂಬೇಡ್ಕರ್ ಭವನದ ಮುಂದಿನ ಮೈದಾನದಲ್ಲಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕಿರಣ್ ಪ್ರಸಾದ್ ಹಾಗೂ ಮುಹಮ್ಮದ್ ಸಲ್ಮಾನ್ರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೊಂದೇಲ್ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನ್ಸಿಲ್ ಗ್ರಿಪ್ಥ್ ಅಲ್ಫ್ರೇಡ್ ಎಂಬಾತನ್ನು ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಡುಶೆಡ್ಡೆ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಪ್ರಜ್ವಲ್ ಅಶ್ವತ್ಥ ವೇಗಸ್ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

