ಅಯೋಧ್ಯೆ: ಶ್ರೀ ರಾಮ ಮಂದಿರ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯ ಹಿನ್ನೆಲೆ ಒಂಬತ್ತು ಮಂದಿ ಸಂತರುಗಳ ಸಮಿತಿ ರಚನೆ ಮಾಡಲಾಗಿದ್ದು, ಇದರಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೂ ಸ್ಥಾನ ದೊರೆತಿದೆ.
ಶ್ರೀ ರಾಮ ಮಂದಿರದ ಟ್ರಸ್ಟ್ ಈ ಸಮಿತಿಗೆ ಸಮ್ಮತಿ ನೀಡಿದ್ದು, ಇದರ ಅಧ್ಯಕ್ಷರಾಗಿ ಮಹಂತ ನೃತ್ಯ ಗೋವಿಂದ ದೇವ ಗಿರಿ ಅವರು ವಹಿಸಿಕೊಂಡಿದ್ದಾರೆ.
ಈ ಸಮಿತಿ ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ನಿರ್ಮೋಹಿ ಅಖಾಡದ ದಿನೇಂದ್ರ ದಾಸ್, ಮನಿರಾಮ್ ಚವಾನಿಯ ಕಮಲನಯನ ದಾಸ್, ರಾಮವಲ್ಲಭ ಕುಂಜ್ನ ರಾಜ್ಕುಮಾರ್ ದಾಸ್, ರಾಮ ಕಥಾ ಕುಂಜ್ನ ರಾಮಾನಂದ ದಾಸ್ಸೇರಿ ಇನ್ನಿತರರನ್ನು ಒಳಗೊಂಡಿದೆ.

