ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಸೆಂಟ್ರಲೈಜ್ಡ್ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ (CEN 04/2026) ಮೂಲಕ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಜೂನಿಯರ್ ಇಂಜಿನಿಯರ್ (JE), ಡೆಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಆಗಸ್ಟ್ 14ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟು 4,098 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 33 ವರ್ಷ ವಯೋಮಿತಿಯೊಳಗಿರಬೇಕು. ಸಂಬಂಧಿತ ವಿಭಾಗದಲ್ಲಿ ಇಂಜಿನಿಯರಿಂಗ್ ಡಿಪ್ಲೊಮಾ, ಪದವಿ ಅಥವಾ ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. ಆನ್ಲೈನ್ ಅರ್ಜಿ ಪ್ರಕ್ರಿಯೆ 2026ರ ಆಗಸ್ಟ್ 14ರಿಂದ ಆರಂಭವಾಗಲಿದ್ದು, 2026ರ ಸೆಪ್ಟೆಂಬರ್ 16ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಸಿಬಿಟಿ ಹಂತ-1, ಸಿಬಿಟಿ ಹಂತ-2, ದಾಖಲೆಗಳ ಪರಿಶೀಲನೆ ಹಾಗೂ ರೈಲ್ವೆ ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 35,400 ಮೂಲ ವೇತನದ ಜೊತೆಗೆ ನಿಯಮಾನುಸಾರ ಇತರೆ ಭತ್ಯೆಗಳನ್ನೂ ನೀಡಲಾಗುತ್ತದೆ. ಪ್ರಾದೇಶಿಕವಾರು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿಭಾಗವಾರು ವಿದ್ಯಾರ್ಹತೆ, ಪರೀಕ್ಷೆಯ ಪಠ್ಯಕ್ರಮ ಸೇರಿದಂತೆ ಹೆಚ್ಚಿನ ಮಾಹಿತಿ ಆಗಸ್ಟ್ 13ರಂದು ಪ್ರಕಟವಾಗುವ ಸಂಪೂರ್ಣ ಅಧಿಸೂಚನೆಯಲ್ಲಿ ಇರಲಿದೆ.

