ಬೆಂಗಳೂರು: ನಾಡಗೀತೆಗೆ ಅಗೌರವ ತೋರಿದ ಅಧಿಕಾರಿಗಳು, ನೌಕರರಿಗೆ ಸಿಎಂ ಡಿಕೆಶಿ ವಿಧಾನಸೌಧದಿಂದಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿ ಎಂ ಅವರು ವಿಧಾನಸೌಧದಿಂದಲೇ ರಾಜ್ಯದ ಸರ್ಕಾರಿ ಅಧಿಕಾರಿಗಳು, ನೌಕರರ ಜೊತೆಗೆ ವಿಡಿಯೋ ಮೂಲಕ ಸಂವಾದ ನಡೆಸುತ್ತಿದ್ದರು. ಆರಂಭದಲ್ಲಿ ನಾಡಗೀತೆ ಹಾಡಲಾಗಿದ್ದು ಈ ವೇಳೆ ದಾವಣಗೆರೆಯ ಜಗಳೂರಿಗೆ ಸಂಬಂಧಿಸಿದ ಅಧಿಕಾರಿಗಳು, ನೌಕರರು ಎದ್ದು ನಿಲ್ಲದೆ ಕುಳಿತುಕೊಂಡೇ ಇದ್ದರು.
ಇದನ್ನು ಗಮನಿಸಿದ ಸಿ ಎಂ ಸಾಹೇಬರು ‘ನನ್ನ ಕಣ್ಣು ಕುರುಡಾಗಿದೆ ಎಂದು ಕೆಲವು ಮಂದಿ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಎಂದು ತಿಳಿದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

