ಬೊಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಒಟ್ಟು 15,000 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದಕ್ಕೆ ಅನುಗುಣವಾಗಿ ವಿಂಗಡಿಸಲಾಗಿದ್ದು, ಲಭ್ಯವಿರುವ ಹುದ್ದೆಗಳ ವಿವರ ಹೀಗಿದೆ
ಕಲ್ಯಾಣ ಕರ್ನಾಟಕ ಪ್ರದೇಶ (6,967 ಹುದ್ದೆಗಳು)
ಗ್ರಾಜುಯೇಟ್ ಪ್ರೈಮರಿ ಟೀಚರ್: 3,228
ಸಹ ಶಿಕ್ಷಕರು: 2,214
ಪ್ರಾಥಮಿಕ ಶಾಲಾ ಶಿಕ್ಷಕರು: 800
ದೈಹಿಕ ಶಿಕ್ಷಣ ಶಿಕ್ಷಕರು: 425
ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 300
ಉಳಿಕೆ ಮೂಲ ವೃಂದ – Non-Kalyana Karnataka (8,033 ಹುದ್ದೆಗಳು)
ಗ್ರಾಜುಯೇಟ್ ಪ್ರೈಮರಿ ಟೀಚರ್: 5,272
ಸಹ ಶಿಕ್ಷಕರು: 2,286
ದೈಹಿಕ ಶಿಕ್ಷಣ ಶಿಕ್ಷಕರು: 175
ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 200
ಪ್ರಾಥಮಿಕ ಶಾಲಾ ಶಿಕ್ಷಕರು: 100
ಅರ್ಹತೆ, ವಯೋಮಿತಿ
ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಸಂಬಂಧಪಟ್ಟ ವಿಷಯದಲ್ಲಿ ಪದವಿ (Graduation), D.El.Ed / B.Ed ಹಾಗೂ K-TET ಅಥವಾ C-TET ತೇರ್ಗಡೆಯಾಗಿರಬೇಕು
ಸಾಮಾನ್ಯ ವರ್ಗ: 21 ರಿಂದ 40 ವರ್ಷಗಳು
ಪ್ರವರ್ಗ 2A, 2B, 3A, 3B: 3 ವರ್ಷ ವಯೋಸಡಲಿಕೆ ಇರುತ್ತದೆ (ಗರಿಷ್ಠ 43 ವರ್ಷ)
SC / ST ಮತ್ತು ಪ್ರವರ್ಗ-1: 5 ವರ್ಷ ವಯೋಸಡಲಿಕೆ ಇರುತ್ತದೆ (ಗರಿಷ್ಠ 45 ವರ್ಷ)
ಆ. 18 ಅರ್ಜಿ ಸಲ್ಲಿಕೆ ಆರಂಭವಾಗುತ್ತಿದ್ದು, ಸೆ. 7 ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಸೆ. 10 ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ. ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

