ಬೆಂಗಳೂರು: ಈ ತಿಂಗಳಾಂತ್ಯದ ಒಳಗೆ ಶೂ, ಸಾಕ್ಸ್ ಪಡೆಯಲು ಬಾಕಿ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಅವುಗಳನ್ನು ವಿತರಣೆ ಮಾಡಲಾಗುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಆಗಸ್ಟ್ 28 ರೊಳಗಾಗಿ ಎಲ್ಲಾ ಮಕ್ಕಳಿಗೂ ಶೂ, ಸಾಕ್ಸ್ ವಿತರಣೆ ಸಂಪೂರ್ಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಇವನ್ನೆಲ್ಲಾ ನೀಡುತ್ತಿದ್ದೇವೆ. ಹಿಂದಿನ ಸರ್ಕಾರ ಇವೆಲ್ಲವನ್ನು ನೀಡುತ್ತಿರಲಿಲ್ಲ. ಟೆಂಡರ್ ನೀಡಲಾಗಿದೆ. ಅದು ತಡವಾಗಿದೆ. ಟೆಂಡರ್ ವಹಿಸಿಕೊಂಡು ತಡ ಮಾಡುತ್ತಿರುವವರ ಮೇಲೆಯೂ ಫೈನ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷದಿಂದ ಸಮಸ್ಯೆ ಇಲ್ಲದಂತೆ ಶೂ, ಸಾಕ್ಸ್ ವಿತರಣೆ ಮಾಡಲಾಗುವುದು. 104 ಕೋಟಿ ಹಣ ಬಾಕಿ ಇದೆ. ಆದಷ್ಟು ಬೇಗ ಶೂ, ಸಾಕ್ಸ್ ವಿತರಣೆ ಮಾಡುತ್ತೇವೆ. ಶೂ, ಸಾಕ್ಸ್ ವಿತರಣೆಗೆ ನೋಡಲ್ ಆಫೀಸ್ ಇಟ್ಟು ಸಮಸ್ಯೆಯನ್ನ ಸರಿ ಮಾಡುವ ಭರವಸೆ ನೀಡಿದ್ದಾರೆ.

