ಬ್ರಹ್ಮಾವರ: ಹೆತ್ತ ತಂದೆ ತಾಯಿಯನ್ನೇ ಪುತ್ರನೊಬ್ಬ ಭೀಕರವಾಗಿ ಕೊಚ್ವಿ ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಬ್ರಹ್ಮಾವರ ತಾಲ್ಲೂಕಿನ ಗಾಂಧಿನಗರದಲ್ಲಿ ನಿನ್ನೆ ರಾತ್ರಿ ಈ ಘೋರ ದುರ್ಘಟನೆ ಸಂಭವಿಸಿದ್ದು, ಹೆತ್ತವರನ್ನೇ ಕೊಚ್ಚಿ ಕೊಲೆಗೈದ ಆರೋಪಿ ಶಾಹಿದ್ ಅಲಿ (31) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಗೆ ನಿಖರ ಕಾರಣ ಹೆಚ್ಚಿನ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಬ್ರಹ್ಮಾವರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

