ಗಂಗೊಳ್ಳಿ: ಅರಬ್ಬೀ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ಬೋಟ್ನ ಹಲಗೆ ಕಿತ್ತುಹೋಗಿ, ನೀರು ಒಳನುಗ್ಗಿ ಮುಳುಗುವ ಸ್ಥಿತಿ ಉಂಟಾದ ಘಟನೆ ನಡೆದಿದೆ.
ಗಂಗೊಳ್ಳಿ ಸೀಮೌತ್ನಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ಘಟನೆ ನಡೆದಿದೆ.
ಶ್ರೀ ಬಾಲಾಂಜನೇಯ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದ್ದು, ಬೋಟ್ನಲ್ಲಿದ್ದ ಒಟ್ಟು 27 ಮಂದಿ ಮೀನುಗಾರರನ್ನು ಗಂಗೊಳ್ಳಿ ಪೊಲೀಸರು ಹಾಗೂ ಕೆಎನ್ಡಿ ಸದಸ್ಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮತ್ತೊಂದು ಬೋಟ್ಗೆ ಸ್ಥಳಾಂತರಿಸಿದ್ದಾರೆ.
ಸುಮುಖ ಹಾಗೂ ಮತ್ಸ್ಯಾಮೃತ ಬೋಟ್ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಂಗೊಳ್ಳಿ ಠಾಣೆಯ ಪಿಐ ರಮೇಶ್ ಕೆ., ಪಿಎಸ್ಐ ಸುಬ್ರಹ್ಮಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಕೆಎನ್ಡಿ ಸದಸ್ಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

