ಉಡುಪಿ: ಪೆರಂಪಳ್ಳಿಯಲ್ಲಿ ವಿದ್ಯುತ್ ಚಾಲಿತ ಆಟೋರಿಕ್ಷಾ ದಿಢೀರ್ ಹೊತ್ತಿ ಉರಿದ ವೇಳೆ, ತಮ್ಮ ಜೀವದ ಹಂಗು ತೊರೆದು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ ಇಬ್ಬರು ಯುವಕರಿಗೆ ಸನ್ಮಾನ ಮಾಡಲಾಯಿತು.
ಸಿವಿಲ್ ಎಂಜಿನಿಯರ್ ಮನೋಜ್ ಹಾಗೂ ಯುವ ಉದ್ಯಮಿ ಶರತ್ ಅವರು ಸಮಯಪ್ರಜ್ಞೆ ಮೆರೆದು, ಬೆಂಕಿ ಸಮೀಪದಲ್ಲಿದ್ದ ಕಾರು ಹಾಗೂ ಮನೆಗೆ ವ್ಯಾಪಿಸದಂತೆ ತಡೆದು ಸಂಭವಿಸಬಹುದಾದ ಭಾರೀ ನಷ್ಟವನ್ನು ತಪ್ಪಿಸಿದ್ದರು.
ಯುವಕರ ಸಾಹಸ ಮತ್ತು ಮಾನವೀಯ ಕಾರ್ಯವನ್ನು ಗುರುತಿಸಿ ಸೀನಿಯರ್ ಛೇಂಬರ್ ಉಡುಪಿ-ಇಂದ್ರಾಳಿ ಘಟಕದಿಂದ ಅಭಿನಂದಿಸಿ ಗೌರವಿಸಲಾಯಿತು. ಸಂಕಷ್ಟದ ಸಂದರ್ಭದಲ್ಲಿ ವಿಡಿಯೋ ಮಾಡುವ ಬದಲು ನೆರವಿಗೆ ಧಾವಿಸಿದ ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

