ಸಿಗರೇಟ್ ಸೇದುವ ಅಭ್ಯಾಸವನ್ನು ಬಿಡಬೇಕು ಎಂದುಕೊಂಡರೂ ಪದೇಪದೇ ಅದೇ ಚಟಕ್ಕೆ ಒಳಗಾಗುತ್ತಿದ್ದೀರಾ ? ಹಾಗಿದ್ದರೆ ಸಿಗರೇಟ್ ಸೇದಬೇಕು ಎಂಬ ತೀವ್ರ ಬಯಕೆ ಬಂದಾಗ ‘4D’
ವಿಧಾನವನ್ನು ಅನುಸರಿಸುವುದು ಸಹಾಯವಾಗಬಹುದು. ಈ ಸರಳ ವಿಧಾನವು ಧೂಮಪಾನದ ಬಯಕೆಯನ್ನು ಕೆಲಕಾಲ ಮುಂದೂಡಲು ಮತ್ತು ಗಮನವನ್ನು ಬೇರೆಡೆಗೆ ಹರಿಸಲು ನೆರವಾಗುತ್ತದೆ.
ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ದೀರ್ಘಕಾಲದ ಅಭ್ಯಾಸದಿಂದ ಅದನ್ನು ತ್ಯಜಿಸುವುದು ಹಲವರಿಗೆ ಸವಾಲಾಗುತ್ತದೆ. ಧೂಮಪಾನ ತ್ಯಜಿಸಲು ನಿರ್ಧರಿಸುವವರು ಮೊದಲಿಗೆ ಒಂದು ದಿನಾಂಕವನ್ನು ನಿಗದಿಪಡಿಸಿಕೊಂಡು,
ಕುಟುಂಬದವರು ಹಾಗೂ ಸ್ನೇಹಿತರ ಬೆಂಬಲ ಪಡೆಯುವುದು ಸಹಾಯಕವಾಗಬಹುದು.
4D ವಿಧಾನದಲ್ಲಿ ನಾಲ್ಕು ಪ್ರಮುಖ ಹಂತಗಳಿವೆ:
- ವಿಳಂಬಿಸಿ (Delay):
ಸಿಗರೇಟ್ ಸೇದಬೇಕು ಎಂಬ ಬಯಕೆ ಬಂದ ತಕ್ಷಣ ಸಿಗರೇಟ್ ಸೇದದೆ ಕೆಲವು ನಿಮಿಷಗಳ ಕಾಲ ಕಾಯಿರಿ. ಈ ತೀವ್ರ ಬಯಕೆ ಸಾಮಾನ್ಯವಾಗಿ ಕೆಲ ಸಮಯದ ಬಳಿಕ ಕಡಿಮೆಯಾಗಬಹುದು. - ಆಳವಾಗಿ ಉಸಿರಾಡಿ (Deep Breathing):
ನಿಧಾನವಾಗಿ ಮತ್ತು ಆಳವಾಗಿ ಉಸಿರನ್ನು ತೆಗೆದುಕೊಂಡು ಬಿಡಿ. ಕೆಲವು ಬಾರಿ ಹೀಗೆ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಲು ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗಬಹುದು.
3. ನೀರು ಕುಡಿಯಿರಿ (Drink Water):
ಸಿಗರೇಟ್ ಸೇದಬೇಕೆನಿಸಿದಾಗ ನೀರನ್ನು ನಿಧಾನವಾಗಿ ಕುಡಿಯಿರಿ. ಇದರಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಸಹಾಯವಾಗಬಹುದು.
- ಬೇರೆ ಏನಾದರೂ ಮಾಡಿ (Do Something Else):
ಸಿಗರೇಟ್ ಬಗ್ಗೆ ಯೋಚಿಸುವ ಬದಲು ಸ್ವಲ್ಪ ನಡೆದಾಡುವುದು, ಸಂಗೀತ ಕೇಳುವುದು, ಮನೆಯ ಕೆಲಸ ಮಾಡುವುದು ಅಥವಾ ಬೇರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಪ್ರಯೋಜನಕಾರಿಯಾಗಬಹುದು.
ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ, ಯೋಗ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡಬಹುದು. ಧೂಮಪಾನ ತ್ಯಜಿಸಲು ಪದೇಪದೇ ವಿಫಲವಾಗುತ್ತಿದ್ದರೆ ವೈದ್ಯರು ಅಥವಾ ಧೂಮಪಾನ ನಿಲುಗಡೆಗೆ ಸಂಬಂಧಿಸಿದ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.

