ಉಡುಪಿ (ಸೆ.25): ಯುಎಇಯ ಶಾರ್ಜಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಕೊನೆಗೂ ಉಡುಪಿಗೆ ತಲುಪಿದೆ.ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಈ ದಾರುಣ ಹತ್ಯೆಯ ಬಳಿಕ, ಇಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮೃತದೇಹವನ್ನು ಕುಂದಾಪುರಕ್ಕೆ ತರಲಾಗಿದ್ದು, ಕಿರಿಯ ಸಹೋದರನ ಶವ ಕಂಡು ಅಣ್ಣ ಸೇರಿದಂತೆ ಇಡೀ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಏನಿದು ಭೀಕರ ಪ್ರಕರಣ?
ಹಲವು ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದ ಅಲ್ವಿನ್ ಪ್ರಕಾಶ್ ಕುಂದರ್ ಅವರನ್ನ ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು 9 ಭಾಗಗಳಾಗಿ ಕತ್ತರಿಸಿ ಎರಡು ಬ್ಯಾಗ್ಗಳಲ್ಲಿ ತುಂಬಿ ಕಾರಿನಲ್ಲಿ ಇಡಲಾಗಿತ್ತು.ಈ ಕೃತ್ಯದ ಹಿಂದೆ ಅಲ್ವಿನ್ ಪತ್ನಿ ಟೀನಾ ಹಾಗೂ ಆಕೆಯ ಮಗನ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಎಸ್ಕೇಪ್ ಆದ ಪತ್ನಿ ಮತ್ತು ಮಗ?
ಕೊಲೆಯ ನಂತರ ಕಾರಿನಲ್ಲಿ ಮೃತದೇಹದ ತುಂಡುಗಳನ್ನು ತುಂಬಿಟ್ಟಿದ್ದ ಆರೋಪಿಗಳು ಶಾರ್ಜಾದಿಂದ ಪರಾರಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಪತ್ನಿ ಮತ್ತು ಮಗ ತಲೆಮರೆಸಿಕೊಂಡಿದ್ದು, ಕುಟುಂಬಸ್ಥರಷ್ಟೇ ಅಲ್ಲದೆ ಸ್ಥಳೀಯರಲ್ಲೂ ಈ ಕ್ರೌರ್ಯ ತೀವ್ರ ಆಘಾತವನ್ನುಂಟುಮಾಡಿದೆ.
ಇಂದು ಶಾಸ್ತ್ರಿ ಸರ್ಕಲ್ ಚರ್ಚ್ನಲ್ಲಿ ಅಂತ್ಯಕ್ರಿಯೆ:
ಸುಮಾರು ಎರಡು ತಿಂಗಳ ಕಾನೂನು ಪ್ರಕ್ರಿಯೆ ಹಾಗೂ ಡಿಎನ್ಎ ಪರೀಕ್ಷೆಯ ನಂತರ ಮೃತದೇಹವನ್ನು ಸ್ವದೇಶಕ್ಕೆ ತರಲು ಸಾಫಲ್ಯ ಸಿಕ್ಕಿದೆ. ಇಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ಚರ್ಚ್ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

