ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಖಾಲಿ ಇರುವ ‘ಅಡ್ಮಿಷನ್ ಕೌನ್ಸಿಲರ್’ (ಪ್ರವೇಶಾತಿ ಸಲಹೆಗಾರರು) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಕನಿಷ್ಠ ಸ್ನಾತಕೋತ್ತರ ಪದವಿ (Post Graduation) ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳು ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ಕೋರ್ಸ್ಗಳು ಹಾಗೂ ಪ್ರವೇಶಾತಿಯ ಕುರಿತು ಮಾರ್ಗದರ್ಶನ ನೀಡುವುದು, ವಿಚಾರಣೆಗಳನ್ನು ನಿರ್ವಹಿಸುವುದು, ಲೀಡ್ಗಳನ್ನು ಪ್ರವೇಶಾತಿಯನ್ನಾಗಿ ಪರಿವರ್ತಿಸುವುದು ಹಾಗೂ ನಿಗದಿಪಡಿಸಿದ ಗುರಿಗಳನ್ನು ತಲುಪುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು 7406243925 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

