ಬೀಟ್ರೂಟ್ ಆರೋಗ್ಯ ಪ್ರಯೋಜನಗಳು: ಸಲಾಡ್, ಜ್ಯೂಸ್, ಸ್ಮೂಥಿ ಸೇರಿದಂತೆ ವಿವಿಧ ಆಹಾರಗಳಲ್ಲಿ ಬೀಟ್ರೂಟ್ ಬಳಸುವುದು ಸಾಮಾನ್ಯ. ತನ್ನ ಕೆಂಪು ಬಣ್ಣದಿಂದ ಗಮನ ಸೆಳೆಯುವ ಈ ತರಕಾರಿ ಕೇವಲ ರುಚಿ ಮತ್ತು ಬಣ್ಣಕ್ಕಷ್ಟೇ ಸೀಮಿತವಾಗಿಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಹಾಗೂ ನೈಸರ್ಗಿಕ ಸಸ್ಯಜನ್ಯ ಸಂಯುಕ್ತಗಳು ಕಂಡುಬರುತ್ತವೆ. ಬೀಟ್ರೂಟ್ ಅನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣ, ರಕ್ತದ ಹರಿವು, ವ್ಯಾಯಾಮದ ಸಮಯದ ದೈಹಿಕ ಕಾರ್ಯಕ್ಷಮತೆ ಸೇರಿದಂತೆ ಹಲವು…
Author: Karavali TV
ಬೆಂಗಳೂರು, ಸೆ.29: ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಮೂತ್ರಪಿಂಡ (ಕಿಡ್ನಿ) ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ವೈದ್ಯಕೀಯವಾಗಿ ದೃಢೀಕರಿಸಲ್ಪಟ್ಟ ಮರಣದ ಕಾರಣಗಳ ವರದಿ (Medical Certification of Cause of Death – MCCD) ಪ್ರಕಾರ, 2016ರಲ್ಲಿ ಈ ಕಾಯಿಲೆಗಳಿಂದ 5,940 ಸಾವುಗಳು ದಾಖಲಾಗಿದ್ದರೆ, 2025ರಲ್ಲಿ ಈ ಸಂಖ್ಯೆ 18,730ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ವೈದ್ಯಕೀಯವಾಗಿ ದೃಢೀಕರಿಸಲ್ಪಟ್ಟ ಒಟ್ಟು ಸಾವುಗಳ ಸಂಖ್ಯೆಯಲ್ಲೂ ಏರಿಕೆ…
ನವದೆಹಲಿ: ಹಬ್ಬಗಳ ಋತು ಆರಂಭವಾಗುತ್ತಿರುವ ಬೆನ್ನಲ್ಲೇ ದಿನನಿತ್ಯದ ಅಡುಗೆಯಲ್ಲಿ ಪ್ರಮುಖವಾಗಿ ಬಳಸುವ ಬೇಳೆಕಾಳುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಪ್ರಮುಖ ಬೇಳೆಕಾಳುಗಳ ದರದಲ್ಲಿ ಶೇ.11ರವರೆಗೆ ಏರಿಕೆ ದಾಖಲಾಗಿದೆ. ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೇಳೆಕಾಳುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ನಡುವೆ ದೇಶದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ಮಳೆ ಕೊರತೆ, ಮಣ್ಣಿನಲ್ಲಿ ತೇವಾಂಶದ…
ಮಲ್ಪೆ, ಸೆಪ್ಟೆಂಬರ್ 29:ಇಲ್ಲಿನ ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಪರಮೇಶ್ ಎಂದು ಗುರುತಿಸಲಾಗಿದೆ. ಇವರು ಗುಜರಿ ಹೆಕ್ಕುವ ಕೆಲಸ ಮಾಡುತ್ತಿದ್ದು, ತಾವು ಪ್ರತಿದಿನ ಮಲಗುತ್ತಿದ್ದ ಜಾಗದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಮಲ್ಪೆ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವದಾದ್ಯಂತ ‘ವಿಶ್ವ ಹೃದಯ ದಿನ’ವನ್ನು ಆಚರಿಸಲಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಅವುಗಳ ಅಪಾಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಹೃದ್ರೋಗಗಳನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ವಿಶ್ವ ಹೃದಯ ಒಕ್ಕೂಟ (WHF) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ 1999ರಲ್ಲಿ ವಿಶ್ವ ಹೃದಯ ದಿನದ ಸ್ಥಾಪನೆಯನ್ನು ಘೋಷಿಸಿದವು. 1997ರಿಂದ…
ಮೇಷ ಇಂದು ಮೇಷ ರಾಶಿಯವರಿಗೆ ಶುಭ ದಿನವಾಗಿರುತ್ತದೆ. ವ್ಯವಹಾರದಲ್ಲಿ ನಿರೀಕ್ಷೆಯಂತೆ ಲಾಭ ದೊರೆಯಲಿದ್ದು, ಆರ್ಥಿಕ ಸ್ಥಿತಿಯೂ ಹಿಂದಿಗಿಂತ ಬಲಗೊಳ್ಳಬಹುದು. ವ್ಯವಹಾರದಲ್ಲಿ ಬದಲಾವಣೆ ತರಲು ಯೋಜಿಸುತ್ತಿದ್ದರೆ, ಹೊಸ ಉದ್ಯಮಗಳನ್ನು ಉತ್ಸಾಹದಿಂದ ಆರಂಭಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವ ಸಾಧ್ಯತೆಯಿದ್ದು, ಕೌಟುಂಬಿಕ ಜವಾಬ್ದಾರಿಗಳನ್ನೂ ಸಮರ್ಥವಾಗಿ ಪೂರೈಸುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಅನಗತ್ಯ ಖರ್ಚುಗಳು ಹೆಚ್ಚಾಗದಂತೆ ನೋಡಿಕೊಳ್ಳಿ. ಪ್ರೇಮ ಜೀವನ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ವೃಷಭ ಇಂದು ಸಾಧಾರಣ ದಿನವಾಗಿರುತ್ತದೆ. ಕೆಲಸದ…
ವಾರಂಬಳ್ಳಿ ಇ.ಎಸ್.ಐ. ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಇ.ಎಸ್.ಐ. ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ವಾರಂಬಳ್ಳಿ ಗ್ರಾಮದ 5.13 ಎಕ್ರೆ ಜಾಗದಲ್ಲಿ 100 ಬೆಡ್ ಆಸ್ಪತ್ರೆ ಹಾಗೂ ಸಿಬ್ಬಂದಿಗಳಿಗೆ 32…
ನವದೆಹಲಿ: ರೂ. 2,000 ಗಿಂತ ಹೆಚ್ಚಿನ ಯುಪಿಐ (UPI) ವಹಿವಾಟುಗಳಿಗೆ ವಿಧಿಸಲಾಗುವ ಹೊಸ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ವ್ಯವಸ್ಥೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಆದಾಗ್ಯೂ, ಈ ಹೊಸ ನಿಯಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಎನ್‌ಪಿಸಿಐ (NPCI) ಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಭಾರತದ ಅತ್ಯಂತ ಪ್ರಸಿದ್ಧ…
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಕುಂದಾಪುರದ ಬಿ.ಎಸ್‌ಸಿ. ನರ್ಸಿಂಗ್ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 28ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:00ರವರೆಗೆ ಕಮಲಾ ಬಾಳಿಗ ಮೆಮೋರಿಯಲ್ ಹಾಲ್, ಎ.ವಿ. ಬಾಳಿಗ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ಆತ್ಮಹತ್ಯೆ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವುದು, ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸುವುದು ಹಾಗೂ ಭಾವನಾತ್ಮಕ ಸಂಕಷ್ಟದಲ್ಲಿರುವವರು ಸಮಯೋಚಿತವಾಗಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರು ನಡುವಿನ ಕರಾವಳಿ ತೀರ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಅಧಿಕೃತ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುವ ಆತಂಕ ಎದುರಾಗಿದೆ. ಸೆಪ್ಟೆಂಬರ್ 27ರ ಸಂಜೆ 5:30 ರಿಂದ ಸೆಪ್ಟೆಂಬರ್ 29ರ ರಾತ್ರಿ 11:30 ರವರೆಗಿನ ಅವಧಿಯಲ್ಲಿ ಸಮುದ್ರದಲ್ಲಿ 0.8 ರಿಂದ…
