ಗುಜರಾತ್ : ಅರಬ್ಬಿ ಸಮುದ್ರಕ್ಕೆ ಹೆಲಿಕಾಪ್ಟರ್ ಬಿದ್ದು 3 ಜನರು ನಾಪತ್ತೆಯಾದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಈ ಅವಘಡ ಸಂಭವಿಸಿದೆ.
ಭಾರತದ ಮೋಟಾರ್ ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ರಕ್ಷಿಸಲು ಹೆಲಿಕಾಪ್ಟರ್ ಆಗಮಿಸಿತ್ತು. ಪೋರಬಂದರ್ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ರಕ್ಷಣಾ ಕಾರ್ಯದಲ್ಲಿ ಹೆಲಿಕಾಪ್ಟರ್ ತೊಡಗಿತ್ತು.
ನಾಲ್ವರನ್ನು ಸೇರಿ ಹೆಲಿಕಾಪ್ಟರ್ ರಾತ್ರಿ 11 ಗಂಟೆಗೆ ಕಾರ್ಯ ನಿರ್ವಹಿಸುತ್ತಿತ್ತು. ಈ ವೇಳೆ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿತ್ತು. ಆದರೆ ಈ ಸಮಯದಲ್ಲಿ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದೆ ಎನ್ನಲಾಗುತ್ತಿದೆ.
ಹೆಲಿಕಾಪ್ಟರ್ ಪತನದ ವೇಳೆ ಓರ್ವನನ್ನು ರಕ್ಷಿಸಿಲಾಗಿದೆ. ಸದ್ಯ ಮೂವರು ನಾಪತ್ತೆಯಾಗಿದ್ದಾರೆ. ಹೆಲಿಕಾಪ್ಟರ್ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ಸದ್ಯ ಮೂವರಿಗಾಗಿ ನಾಲ್ಕು ಹಡಗು, ಎರಡು ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.
https://platform.twitter.com/widgets.jsOn 02 Sep 2024, @IndiaCoastGuard ALH helicopter was launched at 2300 hrs to evacuate an injured crew member from the Motor Tanker Hari Leela off #Porbandar, #Gujarat. The helicopter had to make an emergency hard landing and ditched into sea. One crew member recovered, search for…
— Indian Coast Guard (@IndiaCoastGuard) September 3, 2024

