ಯುವರಾಜ್ ಸಿಂಗ್ ರವರ ತಂದೆ ಯೋಗರಾಜ್ ಸಿಂಗ್ ತನ್ನ ಮಗನ ಬದುಕು ಹಾಳು ಮಾಡಿದ್ದು ಧೋನಿ ಎಂದು ಆರೋಪಿಸಿದ್ದರು. ನಾನು ಆತನನ್ನು ಕ್ಷಮಿಸಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಯ ಬೆನ್ನಲ್ಲೇ ಯುವರಾಜ್ ಸಿಂಗ್ ತನ್ನ ತಂದೆಯ ಬಗ್ಗೆ ಹೇಳಿದ ಹೇಳಿಕೆಯೊಂದು ವೈರಲ್ ಆಗಿದೆ. ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿರುವ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯೋಗರಾಜ್ ಸಿಂಗ್ ಭಾರತದ ಮಾಜಿ ಕ್ರಿಕೆಟಿಗ, ನಟ ಕೂಡ ಹೌದು. ಇವರು ಸಂದರ್ಶನವೊಂದರಲ್ಲಿ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಯುವರಾಜ್ ಸಿಂಗ್ನ ವೃತ್ತಿ ಜೀವನ ಕೊನೆಗೊಳ್ಳಲು ಧೋನಿ ಕಾರಣ. ಯುವಿ ಇನ್ನೂ 4-5 ವರ್ಷ ಆಡಬಹುದಿತ್ತು ಎಂದಿದ್ದರು. ಜೊತೆಗೆ ಕಪಿಲ್ ದೇವ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು. ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೀಗ ಇದರ ಬೆನ್ನಲ್ಲೇ ಯುವರಾಜ್ ಸಿಂಗ್ ತನ್ನ ತಂದೆಯ ಬಗ್ಗೆ ಮಾತನಾಡಿದ ಸಂಗತಿ ಇದೀಗ ವೈರಲ್ ಆಗಿದೆ.
9 ತಿಂಗಳ ಹಿಂದೆ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಅವರು ಗಮನಹರಿಸಬೇಕಾದ ವಿಷಯವಾಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಯೋಗರಾಜ್ ಧೋನಿ ಬಗ್ಗೆ ಏನಂದ್ರು?
‘ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ’ ಎಂದಿದ್ದಾರೆ.
‘ಯಾರಾದರೂ ಯುವರಾಜ್ ಸಿಂಗ್ನಂತಹ ಮಗನನ್ನು ಹುಟ್ಟು ಹಾಕಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ನಂತರ ಆಟಗಾರರು ಎಂದಿಗೂ ಹುಟ್ಟಿಲ್ಲ ಎಂದಿಗೂ ಹುಟ್ಟಲ್ಲ. ಯುವರಾಜ್ ಸಿಂಗ್ಗೆ ಭಾರತ ರತ್ನ ಕೊಡಬೇಕು. ಯುವಿ ಕ್ಯಾನ್ಸರ್ ವಿರುದ್ಧ ಹೋರಾಡಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟವರು’ ಎಂದು ತಂದೆ ಯೋಗರಾಜ್ ಸಿಂಗ್ ಹೇಳಿದ್ದಾರೆ.

