ಉಡುಪಿ : ನಗರದ ಶಿವಳ್ಳಿ ಗ್ರಾಮದಲ್ಲಿ ಹಾಡುಹಗಲೇ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಉಡುಪಿಯ ಶಿವಳ್ಳಿ ಗ್ರಾಮದ ಮಹಿಳೆ ಶಿವಳ್ಳಿ ಗ್ರಾಮದ ಸಗ್ರಿನೋಲ್ ರಸ್ತೆಯಲ್ಲಿರುವ ತಿರುಮಲ ಪೌಲ್ಟ್ರಿ ಫಾರಂ ಬಳಿಯ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಕಳ್ಳತನ ನಡೆದಿದೆ.
ಪೆರಂಪಳ್ಳಿ ಕಡೆಯಿಂದ ಬಂದ ಅಪರಿಚಿತ ವ್ಯಕ್ತಿ ಮಹಿಳೆಯ ಹಿಂದಿನಿಂದ ಬಂದು ಆಕೆಯ ಕತ್ತಿನಲ್ಲಿದ್ದ 16 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

