ಉಡುಪಿ : ನಾಡಿನೆಲ್ಲೆಡೆ ಗಣೇಶ ಚತುರ್ಥಿ ಜೋರಾಗಿ ನಡೆಯುತ್ತಿದೆ. ಅದರಂತೆ ಉಡುಪಿಯ ಕಾಪು ಕಡಲ ತೀರದ ಮರಳಿನಲ್ಲಿ ವಿಶಿಷ್ಟ ಗಣಪನನ್ನು ಕೆತ್ತಲಾಗಿದೆ.
ಕಾಪು ತಾಲೂಕಿನ ಕಲಾವಿದ ಹರೀಶ್ ಸಾಗ ತಂಡದಿಂದ ರಚನೆಯಾದ ಈ ಮರಳು ಶಿಲ್ಪ, ಗಜಾನನಂ ಎಂಬ ಥೀಂ ನೊಂದಿಗೆ ಶಿಲ್ಪ ರಚನೆ ಮಾಡಲಾಗಿದೆ.
ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅಪರೂಪದ ಶಿಲ್ಪ ಇದಾಗಿದೆ. ಹಲವು ಗಂಟೆಗಳ ಪರಿಶ್ರಮದಿಂದ ತಯಾರಾಗಿದ ಈ ಮರಳು ಶಿಲ್ಪ, ಸುಖಾಸೀನ ಭಂಗಿಯಲ್ಲಿ ಗಣಪ ಪವಡಿಸಿದ್ದಾನೆ.

