ಕುಂದಾಪುರ : ಸಾಲಿಗ್ರಾಮ ರೋ ಫಿಟ್ನೆಸ್ ಇವರು ನಡೆಸಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಕ್ಲಾಸಿಕ್ ಹಾಗೂ ಯಕ್ಕುಪ್ಪೆಡ್ ಸ್ಪರ್ಧೆಯಲ್ಲಿ ಸಬ್ ಜೂನಿಯರ್ 69 ಕೆಜಿ ವಿಭಾಗದಲ್ಲಿ 2 ಬೆಳ್ಳಿ ಪದಕ ಪಡೆದಿರುವ ವೈಷ್ಣವಿ ಖಾರ್ವಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜ್ ಗಂಗೊಳ್ಳಿ ವಿದ್ಯಾರ್ಥಿ ಮತ್ತು ಹರ್ಷ ಹೆಗಡೆ 74 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ 1 ಬೆಳ್ಳಿ ಪದಕ ಪಡೆದಿರುವ ಐಎಂಜೆ ಮೂಡ್ಲುಕಟ್ಟೆ ಕಾಲೇಜ್ ವಿದ್ಯಾರ್ಥಿ.
ಇವರು ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್ ಹಾಗೂ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಸದಸ್ಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

