ಬೆಂಗಳೂರು : ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳು ಸೆಪ್ಟೆಂಬರ್ 29ನೇ ತಾರೀಕಿನಿಂದ ಈ ರಿಯಾಲಿಟಿ ಶೋ ಆರಂಭವಾಗಲಿದೆ.
ಈ ಸಲ ಬಿಗ್ ಬಾಸ್ನಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. 11ನೇ ಸೀಸನ್ಗೆ ಹೊಸ ಲೆಕ್ಕ ಎಂಬ ಟ್ಯಾಗ್ಲೈನ್ ಕೂಡ ನೀಡಲಾಗಿದೆ. ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಈ ವೀಕೆಂಡ್ ಸುದೀಪ್ ಜೊತೆ ಬಿಗ್ ಬಾಸ್ ಕಥೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿರುವ ಬಿಗ್ಬಾಸ್ ತಂಡ ಈ ಬಾರಿ ಬಿಗ್ ಸರ್ಪ್ರೈಸ್ ನೀಡಿದೆ.
ಬಿಗ್ಬಾಸ್ ಟೀಮ್, ಈಗಾಗಲೇ ಬಿಗ್ಬಾಸ್ ಸ್ಪರ್ಧಿಗಳ ಹೆಸರು ಫೈನಲ್ ಆಗಿದೆ ಎಂದಿದ್ದಾರೆ.
ಪ್ರತಿಬಾರಿ ಬೇರೆಯದ್ದೇ ಆಗಿರುತ್ತೆ. ಹೊಸ ವ್ಯಕ್ತಿತ್ವಗಳು ಕಾಣಿಸೋಕೆ ಶುರುವಾಗುತ್ತೆ. ಬಿಗ್ ಬಾಸ್ ಸೀಸನ್ 11 ಸುಲಭವಾಗಿರಲ್ಲ. ಸ್ವರ್ಗ – ನರಕ ಇರಬೇಕು. ಇವೆರಡು ಕಾನ್ಸೆಪ್ಟ್ ಅಲ್ಲಿ ಶೋ ನಡೆಯಲಿದೆ ಎಂದು ಸುದೀಪ್ ಹೇಳಿದ್ದಾರೆ.
ಈ ಬಾರಿ ಬಿಗ್ ಬಾಸ್ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್ ಇಂಟರೆಸ್ಟಿಂಗ್ ಮಾಹಿತಿ ತಿಳಿಸಿದ್ದಾರೆ.
ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.
ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ ಎಂದರು.
ಈ ಬಾರಿ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಪ್ರೈಸ್ ನೀಡಲಾಗುತ್ತಿದೆ. ಶೋಗೂ ಮೊದಲೇ 5 ಜನ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ. ಇದೇ ಶನಿವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದೇ ಶೋನಲ್ಲಿ ಬಿಗ್ಬಾಸ್ ಸೀಸನ್ 11ರ 5 ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
ವೈರಲ್ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ!
ಈ ಹೊಸ ಸೀಸನ್ನಲ್ಲಿ ಯಾರೆಲ್ಲಾ ದೊಡ್ಮನೆಗೆ ಬರಬಹುದು ಎಂದು ಒಂದಿಷ್ಟು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್ ಹೆಸರು ಸದ್ದು ಮಾಡುತ್ತಿದೆ. ‘ಬೃಂದಾವನ’ ಸೀರಿಯಲ್ ನಟಿ ಅಮೂಲ್ಯ ಭಾರದ್ವಾಜ್, ಕಿರುತೆರೆ ನಟಿ ಭವ್ಯಾ ಗೌಡ, ಗಾಯಕಿ ಐಶ್ವರ್ಯಾ ರಂಗರಾಜನ್, ಗೌರವ್ ಶೆಟ್ಟಿ, ದೀಪಕ್ ಗೌಡ, ತುಕಾಲಿ ಮಾನಸ, ವರುಣ್ ಆರಾಧ್ಯ, ಪತ್ರಕರ್ತರ ನ್ಯೂಸ್ ಆ್ಯಂಕರ್ ಹರೀಶ್ ನಾಗರಾಜ್, ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಮಂಗಳೂರು ಮೂಲದ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ, ಕನ್ನಡ ಚಿತ್ರರಂಗವನ್ನ ಆಳಿದ ಕೊಡಗಿನ ಬೆಡಗಿ ಪ್ರೇಮಾ, ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ನಲ್ಲಿ ಅಭಿನಯಿಸುತ್ತಿರುವ ತನ್ವಿ ರಾವ್,ಸುಷ್ಮಿತಾ – ಜಗಪ್ಪ ದಂಪತಿ, ನಮಸ್ಕಾರ ದೇವ್ರು ಖ್ಯಾತಿಯ ಯೂಟ್ಯೂಬರ್ ಡಾ. ಬ್ರೋ, (ಗಗನ್), ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾಗಿದ್ದ ಕುಂದಾಪುರ ಮೂಲದ ಚೈತ್ರಾ, ಜೂನಿಯರ್ ದರ್ಶನ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಫೇಮ್ ಆಗಿರುವ ಅವಿನಾಶ್, ಫಿಟ್ನೆಸ್ ಮಾಡಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತರಾಗಿರುವ ಗ್ಲಾಮರ್ ಬೆಡಗಿ ಪವಿ ಪಡುಕೋಣೆ, ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಶ್ರೀಮಂತ ಕುಳ, ಉದ್ಯಮಿ ಹಾಗೂ ರಾಜಕಾರಣಿ ಕೆಜಿಎಫ್ ಬಾಬು ಇವರಿಷ್ಟು ಮಾತ್ರವಲ್ಲದೆ ಈ ಪಟ್ಟಿಯಲ್ಲಿ ಇನ್ನು ಹಲವರು ಹೆಸರು ಕೇಳಿ ಬರುತ್ತಿದೆ. ಆದರೆ ಎಲ್ಲದಕ್ಕೂ ಶೋ ಶುರುವಾಗುವವರೆಗೂ ಕಾದುನೋಡಬೇಕಿದೆ.

