ಉಡುಪಿ : ಇತ್ತೀಚೆಗೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಸ್ ಎನ್ ಎಲ್ ಕೇಬಲ್ ಗಳು ರಾತ್ರಿ ವೇಳೆ ಕಾಣೆಯಾಗುತ್ತಿರುವ ಬಗ್ಗೆ ದೂರು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ನಿರೀಕ್ಷಕರು ನಗರ ಠಾಣಾ ವ್ಯಾಪ್ತಿಯ ಗುಜರಿ ಅಂಗಡಿಗಳಿಗೆ ಹೋಗಿ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.
ಅ.14ರಂದು ಪೊಲೀಸ್ ಸಿಬ್ಬಂದಿ ಅಂಬಲಪಾಡಿಯ ಸರ್ವಿಸ್ ರಸ್ತೆ ಸಮೀಪದ ಅಬ್ದುಲ್ಲಾ ಸ್ಕ್ರ್ಯಾಪ್ ಅಂಗಡಿಗೆ ಭೇಟಿ ನೀಡಿದ್ದು, ಅದರ ಮಾಲೀಕ ಅಬ್ದುಲ್ಲಾ ಬಳಿ ಕಾಪರ್ ಕೇಬಲ್ ತುಂಡುಗಳ ಬಗ್ಗೆ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲವಾಗಿತ್ತು. ನಂತರ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಕೆಲವು ದಿನಗಳ ಹಿಂದೆ ಓರ್ವ ವ್ಯಕ್ತಿ ಗುಜರಿ ಸಾಮಾನುಗಳೊಟ್ಟಿಗೆ ಈ ಕಾಪರ್ ಕೇಬಲ್ ಗಳನ್ನು ತಂದು ನೀಡಿದ್ದು, ತಾನು ಹೆಚ್ಚಿನ ಹಣ ಗಳಿಸುವ ಆಸೆಯಿಂದ ಕಡಿಮೆ ಬೆಲೆಗೆ ಖರೀದಿ ಮಾಡಿರುವುದಾಗಿ ತಿಳಿಸಿದ್ದರು.
ಕಾಪರ್ ಕೇಬಲ್ ತುಂಡುಗಳನ್ನು ಪರಿಶೀಲಿಸಿದಾಗ ಸುಮಾರು 25 ಕೆಜಿ ತೂಕ ಹೊಂದಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

