ಪಡುಬಿದ್ರಿ : ಸಂಕಲಕರಿಯ ಹೊಳೆ ಬದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸುಮಾರು 10000ರೂ. ಮೌಲ್ಯದ 3 ಯುನಿಟ್ಗಳಷ್ಟು ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ಹೆಜಮಾಡಿ ಪೊಲೀಸ್ ಚೆಕ್ಪೋಸ್ಟ್ ಬಳಿ ಪಡುಬಿದ್ರಿ ಪೊಲೀಸರು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ.
ಪಕ್ಷಿಕೆರೆಯ ಟಿಪ್ಪರ್ ಇದಾಗಿದ್ದು ಮೂಲ್ಕಿ ಕಡೆಯಿಂದ ಉಡುಪಿ ಜಿಲ್ಲೆಯತ್ತ ಸಾಗುತ್ತಿದ್ದಾಗ ಪೊಲೀಸರು ತಡೆದು ಪರಿಶೀಲಿಸಿದ್ದರು. ಈ ಕುರಿತಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

