ಕಾರ್ಕಳ : ಕಾರ್ಕಳದ ನಿಟ್ಟೆ ಗ್ರಾಮದ ಎರ್ಮಂಜಪಲ್ಲದಲ್ಲಿನ ಬಾಗಿ ಎಂಬುವವರ ಮನೆಯ ಬಾವಿಗೆ ರಾತ್ರಿಯ ಹೊತ್ತು ಚಿರತೆಯೊಂದು ಬಿದ್ದಿದ್ದು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಈ ಚಿರತೆಯನ್ನು ಮೇಲಕ್ಕೆ ತರುವಂತೆ ಮಾಡಲು, ಅರಣ್ಯ ಇಲಾಖೆಯು ಹರ ಸಾಹಸ ಪಟ್ಟಿದ್ದಾರೆ.
ನಿರಂತರವಾಗಿ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ಸು ಕಂಡಿದ್ದಾರೆ.
ಕಾಡಂಚಿನ ಜಾಗವಾದುದರಿಂದ ಆಹಾರವನ್ನರಸಿ ಚಿರತೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

