ಸಿದ್ದಾಪುರ: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೆಳ್ವೆಯಲ್ಲಿ ನಡೆದಿದೆ.
ಗೋಳಿಯಂಗಡಿ ಜ್ಯುವೆಲ್ಲರ್ಸ್ ವೊಂದರ ಮಾಲಕ ಶ್ರೀಧರ ಆಚಾರ್ಯ ಅವರ ಪುತ್ರ 13 ವರ್ಷದ ಶ್ರೀಶ (8ನೇ ತರಗತಿ) ಹಾಗೂ ಗುಮ್ಮಹಲ ಎಂಬಲ್ಲಿನ ರಾಮ ನಾಯ್ಕ ಅವರ ಪುತ್ರ 19 ವರ್ಷದ ಜಯಂತ್ ಮೃತಪಟ್ಟವರು ಎಂದು ತಿಳಿದು ಬಂದಿದೆ.

