ಹೆಬ್ರಿ : ಕೆಳಪೇಟೆಯ ಮೂರು ರಸ್ತೆ ಸಮೀಪ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ನವೆಂಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಶವವೊಂದು ದೊರೆತಿದೆ.
ಕಸದ ರಾಶಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವು, ಹೆಬ್ರಿ ಸಂತೆಕಟ್ಟೆಯ ನಿವಾಸಿಯಾದ ರಾಜೀವ ಪಾಣರ (54) ಎಂದು ಗುರುತಿಸಲಾಗಿದೆ.
ಬೆಳಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರು ವಿಪರೀತ ಮದ್ಯಪಾನದ ಚಟವನ್ನು ಹೊಂದಿದ್ದರು ಹಾಗೂ ನಿತ್ಯ ಮನೆಗೆ ತೆರಳದೆ ಬಸ್ ನಿಲ್ದಾಣದ ಬಳಿ ಇರುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇವರು ಆತ್ಮಹತ್ಯೆ ಮಾಡಿಕೊಂಡಿರುವರೋ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿದ್ದಾರೋ ಎಂಬುದನ್ನು ತನಿಖೆಯ ಮೂಲಕ ತಿಳಿಯ ಬೇಕಾಗಿದೆ.

