ಉಡುಪಿ : ವಾಟ್ಸಾಪ್ ಗೆ APK ಫೈಲ್ ವೊಂದನ್ನು ಕಳುಹಿಸಿ 3,83,800 ಮೊತ್ತವನ್ನು ಆನ್ಲೈನ್ ವಂಚನೆ ಮಾಡಿರುವ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಳ್ಳಿ ಗ್ರಾಮದ ಕೆ. ಜಯರಾಮ (69) ಇವರ ವಾಟ್ಸಾಪ್ಗೆ APK File ಬಂದಿದ್ದು ಅದನ್ನು ಒತ್ತಿದ ತಕ್ಷಣವೇ ಅವರ ಯುನಿಯನ್ ಬ್ಯಾಂಕ್ ಎಸ್ಬಿ ಸಹಿತ ಬೇರೆ ಬೇರೆ ಖಾತೆಯಲ್ಲಿದ್ದ ಒಟ್ಟು 3,83,800 ರೂಪಾಯಿಯನ್ನು ಆರೋಪಿಯು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

