ಸುಳ್ಯ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೋರ್ವರ ಬಳಿಯಿಂದ ಸೊತ್ತುಗಳನ್ನು ವ್ಯಕ್ತಿಯೋರ್ವ ಕಳ್ಳತನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬಳಿಗೆ ಬಂದ ವ್ಯಕ್ತಿಯೋರ್ವ ಪ್ರಯಾಣಿಕನ ಬಳಿಯಿದ್ದ ಬ್ಯಾಗ್ ಮತ್ತು ಶೂ ಕಳವುಗೈದು ಪರಾರಿಯಾಗಿದ್ದಾನೆ.
ಕೃತ್ಯದ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಯುವಕನಿಗೆ ಎಚ್ಚರವಾದಾಗ ಕಳ್ಳತನ ಕೃತ್ಯ ಗಮನಕ್ಕೆ ಬಂದಿದೆ.
ಸುಳ್ಯ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯ ಪೊಲೀಸ್, ಗೃಹರಕ್ಷಕ ಸಿಬಂದಿ ಇಲ್ಲದಿರುವುದೇ ಇಲ್ಲಿ ಕಳ್ಳತನ ಕೃತ್ಯ ನಡೆಯಲು ಕಾರಣ ಎನ್ನಲಾಗಿದೆ. ಈ ಹಿಂದೆಯೂ ಇಲ್ಲಿ ಕಳ್ಳತನ ನಡೆದ ಘಟನೆಗಳು ನಡೆದಿವೆ. ಬಸ್ ನಿಲ್ದಾಣದಲ್ಲಿ ರಾತ್ರಿ ಪಾಳಿಗೆ ಭದ್ರತಾ ಸಿಬಂದಿ ನಿಯೋಜಿಸಬೇಕು. ಪೊಲೀಸರೂ ಗಸ್ತು ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

