ಇದು ಮಾಡರ್ನ್ ಯುಗ. ವೇಗವಾಗಿ ಬೆಳೆಯುತ್ತಿರುವ ಸಮಾಜ ಅನೇಕ ಆವಿಷ್ಕಾರಗಳಿಂದಾಗಿ ತುಂಬಿ ಹೋಗಿದೆ. ಮನುಷ್ಯನ ಜೀವನ ಶೈಲಿ ಬದಲಾಗುತ್ತಿರುವುದರ ಜೊತೆಗೆ ಆಹಾರ ಪದ್ಧತಿಯೂ ಬದಲಾಗಿದೆ. ತೀವ್ರ ಒತ್ತಡ, ಜಂಜಾಟ, ಮಾಲಿನ್ಯ ಇನ್ನು ಅನೇಕ ಕಾರಣಗಳಿಂದ ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲವಾಗುತ್ತಾ ಬರುತ್ತಿದ್ದಾನೆ. ಈ ನಡುವೆ ಈ ಕೆಳಗಿನ ಯಾವುದೇ ಸೂಚನೆಗಳು ನಿಮಗೆ ಕಂಡುಬಂದಲ್ಲಿ ನೆಗ್ಲೆಟ್ ಮಾಡಬೇಡಿ. ಅದು ಸಾವಿಗೆ ಆಹ್ವಾನವಾಗಿರಬಹುದು.
ತೀವ್ರ ಒತ್ತಡದಿಂದ ಕೆಲವೊಮ್ಮೆ ದವಡೆ ಬಿಗಿಯುವುದು ಅಥವಾ ಹಲ್ಲು ಕಡಿಯುವುದು ಕೆಲವರ ಅಭ್ಯಾಸವಾಗಿರುತ್ತದೆ. ಕೆಲವರು ನಿದ್ರೆ ಮಾಡುವಾಗ ಇದನ್ನು ಮಾಡಿದ್ರೆ ಇನ್ನೂ ಕೆಲವರು ಎಚ್ಚರವಿರುವಾಗಲೇ ಮಾಡುತ್ತಾರೆ. ಹೀಗೆ ಮಾಡುವುದರಿಂದ ದವಡೆ ನೋವು, ಮುಖದ ಸ್ನಾಯುಗಳ ಸೆಳೆತ ಇನ್ನಿತರ ಸಮಸ್ಯೆ ಉದ್ಭವಿಸಬಹುದು.
ಉಸಿರಾಟದ ಸಮಸ್ಯೆ ಕೂಡಾ ಕೆಲವರನ್ನು ಹೆಚ್ಚಾಗಿ ಬಾಧಿಸಬಹುದು. ವಿಶೇಷವಾಗಿ ಭಯ ಮತ್ತು ಆತಂಕಗಳಿದ್ದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಇನ್ನು ಕೆಲವರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳೂ ಆಗುತ್ತಿರುತ್ತದೆ. ವಾಕರಿಕೆ, ಹೊಟ್ಟೆ ಉಬ್ಬರಿಸುವಿಕೆ, ಅತಿಸಾರ ಸಮಸ್ಯೆ ಶುರುವಾಗುತ್ತದೆ.
ಇನ್ನೂ ಕೆಲವರು ಒತ್ತಡ, ಅಗ್ರೆಷನ್, ಮುಂಗೋಪದಿಂದ ತೂಕ ಹೆಚ್ಚಾಗುತ್ತಾರೆ, ತೂಕ ಕಡಿಮೆಯಾಗುತ್ತಾರೆ.ಆದರೆ ಇದನ್ನೂ ನಿರ್ಲಕ್ಷಿಸುವಂತಿಲ್ಲ. ಇನ್ನೂ ಕೆಲವರಿಗೆ ಒತ್ತಡದಿಂದ ಲೈಂಗಿಕ ಆಸಕ್ತಿ ಕೂಡಾ ಕುಂಠಿತವಾಗುತ್ತದೆ. ಒತ್ತಡ ಹೆಚ್ಚಾದರೆ ಮಿದುಳಿನ ಗಡ್ಡೆ ಕೂಡಾ ಬೆಳೆಯುವ ಸಾಧ್ಯತೆ ಇರುತ್ತದೆ. ಇದು ಜೀವಕ್ಕೆ ಅಪಾಯ. ಆದ್ದರಿಂದ ನಾವು ಒತ್ತಡಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬೇಕು. ಈ ಮೇಲಿನ ಏನೇ ಸಮಸ್ಯೆ ಬಾಧಿಸುತ್ತಿದ್ದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು

