ಕಾರ್ಕಳ:- 2023ರ ಫೆಬ್ರವರಿ 1ರಿಂದ ಇಲ್ಲಿಯವರೆಗೆ ಅರವಿಂದ್ ಕಲಗುಜ್ಜಿ ಅವರು ಕಾರ್ಕಳದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರು ವರ್ಗಾವಣೆಯಾಗಿ ಹೊಸ ಎಎಸ್ ಪಿ ಆಗಿ ಡಾ. ಹರ್ಷ ಪ್ರಿಯಂವದ ಅವರು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಮೂಲತಃ ಜಾರ್ಖಂಡ್ ನ ಧನ್ಭಾದ ಜಿಲ್ಲೆಯ ಡಾ. ಹರ್ಷ ಪ್ರಿಯಂವದ ಅವರು ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದು ಇದೀಗ ಕಾರ್ಕಳದ ನೂತನ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇವರು 2018ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಶಿಕ್ಷಣವನ್ನು ಕೂಡಾ ಪೂರೈಸಿದ್ದಾರೆ.

