ಡಬಲ್ ಡಿಗ್ರಿ ಪಡೆದು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ರೆ ಇದೊಂದು ನಿಮಗೆ ಉತ್ತಮ ಆಯ್ಕೆ ಅಗಬಹುದೇನೋ. ನೀವಹ ಎಂ.ಟೆಕ್, ಎಂ.ಇ ಅಥವಾ ಪಿಹೆಚ್ಡಿ ಪದವಿಯನ್ನು ಪೂರೈಸಿದ್ದರೆ ಈ ಹುದ್ದೆಗೆ ಧಾರಾಳವಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ವೃತ್ತಿ ಜೀವನಕ್ಕೆ ಈ ಹುದ್ದೆ ಅಡಿಪಾಯ ಹಾಕುವುದರಲ್ಲಿ ಸಂಶಯವೇ ಇಲ್ಲ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಅಧೀನದಲ್ಲಿ ಬರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಯು ನಾಲ್ಕು ಹುದ್ದೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದೆ. ವಿಜ್ಞಾನಿ ಹುದ್ದೆ ಇದಾಗಿದ್ದು ವೇತನ ೬೭೦೦೦ಕ್ಕಿಂತಲೂ ಅಧಿಕ ಇರಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ಮೂವತ್ತೆರಡು ವರ್ಷ ಮೀರಿರಬಾರದು. ನಿನ್ನೆಯಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಕೊನೆಯ ದಿನಾಂಕ ಎಪ್ರಿಲ್ ಮೂರು. ಜಾತೀವಾರು ಮೀಸಲಾತಿ ಹುದ್ದೆಗಳ ಸ್ಥಾನ ಕೂಡಾ ಇರಲಿದೆ.
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ ಇರಲಿದೆ. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಡೇಟ್ಸ್ ಪಡೆದುಕೊಳ್ಳಬಹುದು.

