ಕಾರ್ಕಳ:- ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಮಕ್ಕಿಯ ಮನೆಯೊಳಗೆ ನವವಿವಾಹಿತೆಯೋರ್ವಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಪ್ಪತ್ತನಾಲ್ಕು ವರ್ಷದ ಶ್ರೀನಿಧಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಇವರು ಮೂಲತಃ ಕಾರ್ಕಳದ ಕುಕ್ಕುಂದೂರು ಗ್ರಾಮದ ಕುದುರುನಬೆಟ್ಟು ನಿವಾಸಿಯಾಗಿದ್ದು ಒಂದು ವರ್ಷದ ಹಿಂದೆ ಬೆಟ್ಟಮಕ್ಕಿಯ ಸುದೀಪ್ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಶ್ರೀನಿಧಿ ಅವರ ಈ ದುಡುಕಿನ ನಿರ್ಧಾರಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

