ಉಡುಪಿ: ನೂರಾಳ್ಬೆಟ್ಟು ಗ್ರಾಮದ ಸುಜಯ (36) ಅವರು ನಾಪತ್ತೆಯಾಗಿದ್ದಾರೆ.
ಮದ್ಯ ಸೇವನೆ ಚಟ ಹೊಂದಿದ್ದು ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ಫೆ. 18ರ ಸಂಜೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಅವರ ಸಹೋದರ ಉದಯ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

