ದಿನನಿತ್ಯದ ಜೀವನದಲ್ಲಿ ನಾವು ಅನೇಕ ರೀತಿಯ ಆಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಅಂತೂ ನಾವು ಕಳಪೆ ಮಟ್ಟದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರು ಜಂಕ್ ಫುಡ್ ಗೆ ಎಡಿಕ್ಟ್ ಆಗಿಬಿಟ್ಟಿದ್ದಾರೆ. ಇದರಿಂದಲೇ ದೇಹದಲ್ಲಿ ಬೊಜ್ಜು ಬೆಳೆದು ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಅದರಲ್ಲೂ ನಾವು ಚಹಾ, ಕಾಫಿಗಳಿಗೆ ಬಳಸುವ ಸಕ್ಕರೆ ಒಂಥರಾ ವಿಷವಿದ್ದಂತೆ. ಇದು ರೋಗಗಳನ್ನು ದೇಹದೊಳಗೆ ಅಮಂತ್ರಿಸಿಬಿಡುತ್ತದೆ.
ಆಹಾರ ಪದಾರ್ಥಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬಳಕೆ ಮಾಡುವುದರಿಂದ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗುವುದರ ಜೊತೆಗೆ ದೇಹದ ತೂಕ ಇದ್ದಕ್ಕಿದಂತೆ ಹೆಚ್ಚಾಗಿಬಿಡುತ್ತದೆ. ಯಾಕೆಂದರೆ ಸಕ್ಕರೆಯಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳು, ಯೂಟೂಬರ್ಸ್ ನೋ ಶುಗರ್ ಚಾಲೆಂಜ್ ಮಾಡುತ್ತಿದ್ದಾರೆ.
ಅತಿಯಾದ ಸಕ್ಕರೆ ಸೇವನೆಯಿಂದ ಕಾರಣಕ್ಕೆ ಹೃದ್ರೋಗ, ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳ ಅಪಾಯ ಕೂಡ ಹೆಚ್ಚುವ ಸಾಧ್ಯತೆ ಇದೆ. ಇನ್ನೂ ಶಾಕಿಂಗ್ ವಿಚಾರ ಏನೆಂದರೆ ಸಕ್ಕರೆಯ ಅತಿಯಾದ ಬಳಕೆಯಿಂದ ದೇಹದ ಮುಖ್ಯಭಾಗಗಳಲ್ಲಿ ಒಂದಾದ ಲಿವರ್ ಗೆ ಕೂಡ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಸಕ್ಕರೆ ದೇಹದಲ್ಲಿ ಆಕ್ಸಿಡೇಟಿವ್ ರಾಡಿಕಲ್ಸ್ ಎಂದು ಕರೆಯಲ್ಪಡುವ ವಿಷವನ್ನು ಬಿಡುಗಡೆ ಮಾಡುತ್ತದೆ, ಇದು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ವಿಷವೆಂದೇ ಪರಿಗಣಿಸಲ್ಪಡುವ ಸಕ್ಕರೆಯ ಸೇವನೆಯನ್ನು ಆದಷ್ಟು ನಿಯಂತ್ರಿಸಿಕೊಳ್ಳಬೇಕು. ಇದರ ಬದಲು ನಾವು ಬೆಲ್ಲವನ್ನು ಬಳಸಬಹುದು.



