ಮೂಡುಪೆರಾರ: ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡ ಬೆನ್ನಲ್ಲೇ ಇದೀಗ ನಾಪತ್ತೆಯಾಗಿದ್ದ ಮೂಡುಪೆರಾರದ ನಿತೇಶ್ ಪ್ರಕರಣ ಕೂಡಾ ಅಂತ್ಯ ಕಂಡಿದೆ. ಈತ ಗೋವಾದಲ್ಲಿ ಪತ್ತೆಯಾಗಿದ್ದಾನೆ.
ಬಜಪೆಯ ಮೂಡುಪೆರಾರ ನಿವಾಸಿ, ನೀರುಮಾರ್ಗ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಹತ್ತೊಂಭತ್ತು ವರ್ಷದ ನಿತೇಶ್ ಬೆಳ್ಚಾಡ ಅವರು ಕಳೆದ ಹಲವು ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ.
ಫೆಬ್ರವರಿ ೧೩ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದು ಸುಳಿವು ಸಿಕ್ಕಿರಲಿಲ್ಲ. ಇದೀಗ ಆತ ಗೋವಾದಲ್ಲಿ ಸಿಕ್ಕಿದ್ದಾನೆ. ಈತ ನಾಪತ್ತೆಯಾಗಿರಲು ಕಾರಣವೇನು ಎಂಬುವುದು ಇನ್ನೂ ತಿಳಿದುಬಂದಿಲ್ಲ.


