ಉಡುಪಿ: ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಮಾರ್ಚ್ ಹತ್ತೊಂಬತ್ತರವರೆಗೆ ನಡೆಯಲಿದೆ.
ಕ್ಷೇತ್ರದ ತಂತ್ರಿಗಳಾದ ಕೆ.ಜಿ ರಾಘವೇಂದ್ರ ತಂತ್ರಿ ಹಾಗೂ ಅರ್ಚಕ ಪಿ. ಕೃಷ್ಣ ಅಡಿಗ ಅವರ ಧಾರ್ಮಿಕ ನೇತೃತ್ವದಲ್ಲಿ ವಿವಿಧ ವಿಧಿವಿಧಾನಗಳೊಂದಿಗೆ ವಾರ್ಷಿಕ ಜಾತ್ರೆ ನಡೆಯಲಿದೆ. ಇಂದು ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ ನಡೆಯಲಿದೆ.
ನಾಳೆ ಮೀನ ಸಂಕ್ರಮಣ ಆಚರಣೆ ನಡೆಯಲಿದ್ದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದೆ. ಸನ್ನಿಧಾನದಲ್ಲಿ ಮಾ.೧೬ರಂದು ಶ್ರೀ ಮನ್ಮಹಾರಥೋತ್ಸವ ಮತ್ತು ಮರುದಿನ ಆರಟೋತ್ಸವ ಕೂಡಾ ಜರುಗಲಿದೆ.


