ಮನುಷ್ಯನ ದೇಹಕ್ಕೆ ಎಲ್ಲಾ ತೆರನಾದ ಹಣ್ಣುಗಳು ಕೂಡಾ ಉತ್ತಮವೇ. ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿಡಲು ಸೀಸನಲ್ ಹಣ್ಣುಗಳನ್ನು ಸೇವಿಸುವುದು ಹೆಚ್ಚು ಸೂಕ್ತ. ಅದರಲ್ಲಿ ಕಲ್ಲಂಗಡಿ ಹಣ್ಣು ಕೂಡಾ ಒಂದು. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ ಹಣ್ಣು ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ತೂಕ ಇಳಿಸಿಕೊಳ್ಳಲು ಕಲ್ಲಂಗಡಿ ತಿನ್ನುವುದು ಒಳ್ಳೆಯದು. ಕಲ್ಲಂಗಡಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರು ಇರುತ್ತದೆ. ಬೇಸಿಗೆಯಲ್ಲಿ ಲಭ್ಯವಿರುವ ಇತರ ಹಣ್ಣುಗಳಿಗೆ ಹೋಲಿಸಿದರೆ ಕಲ್ಲಂಗಡಿಯಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ.
ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ಫೈಬರ್ ಅಂಶಗಳು ಸಮೃದ್ಧವಾಗಿದೆ. ಬೆಳಿಗ್ಗೆ ಉಪಾಹಾರದ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವಿಸುವುದು ತೂಕ ಇಳಿಸಿಕೊಳ್ಳಲು ಹೆಚ್ಚು ಸಹಾಯಕವಾಗಿದೆ. ತುಂಬಾ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಇದನ್ನು ನಿಯಮಿತವಾಗಿ ಸೇವಿಸಬಹುದು.
ಇದನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದ್ದರಿಂದ ನಾವು ಇತರ ಜಂಕ್ ಫುಡ್ ಗಳು ಅಥವಾ ಕರಿದ ತಿಂಡಿಗಳನ್ನು ತಿನ್ನುವ ಸಾಧ್ಯತೆಯನ್ನು ಕೂಡಾ ಇದು ಕಡಿಮೆ ಮಾಡುತ್ತದೆ. ಈ ಹಣ್ಣನ್ನು ತುಂಡು ಮಾಡಿ ಅದಕ್ಕೆ ಚಿಟಿಕೆಯಷ್ಟು ಉಪ್ಪು ಬೆರೆಸಿ ತಿಂದರೆ ರುಚಿಯೂ ಇರುತ್ತದೆ ಮತ್ತು ತೂಕ ಇಳಿಕೆಗೆ ಬಹಳಷ್ಟು ಸಹಕಾರಿಯಾಗುತ್ತದೆ.

