ಸುಬ್ರಹ್ಮಣ್ಯ: ಇತ್ತೀಚೆಗೆ ಸಿನಿಮಾ ತಾರೆಯರು ಕರಾವಳಿ ಕ್ಷೇತ್ರದ ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವರ ದರ್ಶನ ಪಡೆದು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಮೊನ್ನೆ ತಾನೇ ನಟಿ ಕತ್ರಿನಾ ಕೈಫ್ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸರ್ಪಸಂಸ್ಕಾರ ನೆರವೇರಿಸಿದ್ದರು. ಇದೀಗ ನಟ ಪ್ರಭುದೇವ್ ಅವರು ಕುಟುಂಬ ಸಮೇತ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಪತ್ನಿ ಹಾಗೂ ಫ್ಯಾಮಿಲಿ ಜೊತೆ ಆಗಮಿಸಿದ್ದ ನಟ ಪ್ರಭುದೇವ ಅವರು ಸನ್ನಿಧಾನದಲ್ಲಿ ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಮುಖ್ಯ ಅರ್ಚಕರಿಂದ ಪ್ರಸಾದವನ್ನು ಪಡೆದರು.
ದೇಗುಲದ ವತಿಯಿಂದ ದಂಪತಿಯನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ನಂತರ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಮಠಕ್ಕೆ ಕೂಡಾ ಭೇಟಿ ನೀಡಿದ್ದಾರೆ.


