ಕಿನ್ನಿಗೋಳಿ: ಸ್ಕೂಟರ್ ಗೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಬಳಿ ನಡೆದಿದೆ.
ವಿಜಯಪುರದ ತಡವಲಗ ಗ್ರಾಮದ ಇಪ್ಪತ್ತು ವರ್ಷದ ರಾಹುಲ್ ಹನುಮಂತ ಡೊಂಬರ ಮೃತ ಯುವಕ. ಈತ ಕಟೀಲುನಿಂದ ಮುಲ್ಕಿಯ ಕಡೆಗೆ ಹೋಗುತ್ತಿದ್ದಾಗ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ.
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


