ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿಸೂರ್ಯ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ನವದಂಪತಿಗೆ ದೇಗುಲದ ವತಿಯಿಂದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ದೇವರ ಶೇಷವಸ್ತ್ರವನ್ನು ನೀಡಿದರು. ದುರ್ಗೆಯ ಮುಂದೆ ಸಂಸದ ತೇಜಸ್ವಿ ಸೂರ್ಯ ಅವರು ದುರ್ಗಾ ಸ್ತೋತ್ರ ಪಠಿಸಿದರು. ನಂತರ ದಂಪತಿ ತನ್ನ ಕುಟುಂಬವರ್ಗದವರ ಜೊತೆ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅನಂತಪದ್ಮನಾಭ ಅಸ್ರಣ್ಣ ಮತ್ತಿತ್ತರರು ಉಪಸ್ಥಿತರಿದ್ದರು.

