ಉಡುಪಿ: ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೂ ಕರ್ಕಶವಾಗಿ ಡಿಜೆ ಹಾಕಿ ಊರಿನವರ ಶಾಂತಿ ಭಂಗ ಮಾಡಿದ ಕಾರಣಕ್ಕೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಬೆಳಂಜೆ ಗ್ರಾಮದ ಈಶ್ವರ ನಗರದ ಕೃಷ್ಣಮೂರ್ತಿ ಎಂಬವರ ಮನೆಯಲ್ಲಿ ಮಾರ್ಚ್ ಹದಿನೈದರಂದು ರಾತ್ರಿ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಆದ್ದರಿಂದ ಡಿಜೆ ಸೌಂಡ್ ಗೆ ಜೋರಾಗಿ ಕುಣಿದು ಕುಪ್ಪಳಿಸುತ್ತಿದ್ದರು.
ಕಾರ್ಯಕ್ರಮಕ್ಕೆ ಯಾವುದೇ ಲೈಸೆನ್ಸ್ ಇಲ್ಲದೆ ಬೆಳಂಜೆ ಗ್ರಾಮದ ಈಶ್ವರ ಎಂಬವರ ಮಾಲೀಕತ್ವದ ಸೌಂಡ್ಸ್ ನವರು ತಡರಾತ್ರಿಯವರೆಗೂ ಕರ್ಕಶವಾಗಿ ಡಿಜೆ ಹಾಕಿದ ಪರಿಣಾಮ ಸಾರ್ವಜನಿಕರ ನೆಮ್ಮದಿ ಭಂಗವಾಗಿದೆ ಎಂದು ದೂರು ನೀಡಲಾಗಿದೆ.


