ಕಾರ್ಕಳ: ಕಾರ್ಕಳ ತಾಲ್ಲೂಕಿನ ಬೈಲೂರಿನಲ್ಲಿರ ಹೆಮ್ಮೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಚಿಕೇತ ವಿದ್ಯಾಲಯದಲ್ಲಿ ಉದ್ಯೋವಕಾಶವಿದ್ದು ಶಿಕ್ಷಕರು ಬೇಕಾಗಿದ್ದಾರೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮುಖ್ಯೋಪಾಧ್ಯಾಯ ಹುದ್ದೆ ಭರ್ತಿಗೆ ಬಿ.ಎಡ್ ಪದವಿ ಜೊತೆಗೆ ಬಿಎ ಮತ್ತು ಎಂ.ಎ ಪದವಿಯನ್ನು ಮುಗಿಸಿರುವ ಹಾಗೂ ಶಿಕ್ಷಕ ವೃತ್ತಿಯಲ್ಲಿ ಕನಿಷ್ಠ ಐದು ವರ್ಷಗಳಿಗಿಂತಲೂ ಹೆಚ್ಚು ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹಾಗೆಯೇ ಇಂಗ್ಲೀಷ್, ಕನ್ನಡ, ಹಿಂದಿ ಮತ್ತು ಸಮಾಜ ಭಾಷೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಬೇಕಾಗಿದ್ದು ಅವರು ಬಿ.ಎ ಮತ್ತು ಬಿ.ಎಡ್ ಪದವಿಯನ್ನು ಮುಗಿಸಿ ಕನಿಷ್ಠ ಒಂದು ವರ್ಷವಾದರೂ ಈ ಹುದ್ದೆಯಲ್ಲಿ ಅನುಭವ ಪಡೆದಿರಬೇಕು.
ಇನ್ನು ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಬಿ.ಎಸ್ಸಿ ಮತ್ತು ಬಿ.ಎಡ್ ಪದವಿಯನ್ನು ಪೂರೈಸಿ ಅನುಭವ ಹೊಂದಿರಬೇಕು. ಜೊತೆಗೆ ಅನುಭವವುಳ್ಳ ದೈಹಿಕ ಶಿಕ್ಷಕರು ಬೇಕಾಗಿದ್ದಾರೆ. ಚಟುವಟಿಕೆಯ ಮುಖೇನ ಮಕ್ಕಳ ಕಲಿಕಾ ಸಾಮರ್ಥ್ಯದ ಗುಣಮಟ್ಟವನ್ನು ಹೆಚ್ಚಿಸುವ ಸೂಕ್ತ ಅನುಭವವಿರುವ ಮಾಂಟೆಸ್ಸರಿ ಶಿಕ್ಷಕರು ಕೂಡಾ ಬೇಕಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ನಚಿಕೇತ ವಿದ್ಯಾಲಯದ ಕಚೇರಿ ಇಮೇಲ್ ಅಡ್ರೆಸ್ nachikethabailur@gmail.com ಇದಕ್ಕೆ ತಮ್ಮ ರೆಸ್ಯೂಮ್ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 9740069896 ಅಥವಾ 6366068206ಈ ನಂಬರಿಗೆ ಸಂಪರ್ಕಿಸಬಹುದು.


