ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯದ ಜನತೆ ಕಂಗೆಟ್ಟು ಹೋಗಿದೆ. ಇದೀಗ ಮತ್ತೆ ಸರ್ಕಾರ ಕರೆಂಟ್ ಶಾಕ್ ನೀಡಿದೆ. ಹೌದು ರಾಜ್ಯದಲ್ಲಿ ಗ್ರಾಹಕರಿಗೆ ವಿದ್ಯುತ್ ದರ ಬಿಸಿ ತಟ್ಟಲಿದೆ.
ಎಪ್ರಿಲ್ ಒಂದರಿಂದ ರಾಜ್ಯದಲ್ಲಿ ಹೊಸ ವಿದ್ಯುತ್ ದರವನ್ನು ಪರಿಷ್ಕರಿಸಲಾಗುತ್ತಿದ್ದು ಗ್ರಾಹಕರಿಗೆ ಗೃಹಜ್ಯೋತಿ ದೊಡ್ಡ ತಲೆನೋವಾಗಿ ಪರಿವರ್ತನೆಯಾಗಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಬೆಲೆ ಏರಿಕೆ ಹಿನ್ನೆಲೆ ಆದೇಶ ಹೊರಡಿಸಿದೆ. ಪ್ರತೀ ಯುನಿಟ್ ವಿದ್ಯುತ್ ದರ ಮೂವತ್ತಾರು ಪೈಸೆ ಹೆಚ್ಚಾಗಲಿದೆ. ಎಪ್ರಿಲ್ ಒಂದರಿಂದ ಈ ಹೊಸ ನಿಯಮ ಜಾರಿಯಾಗುತ್ತದೆ.

