ಬ್ರಹ್ಮಾವರ: ಹೆಗ್ಗುಂಜೆ ಗ್ರಾಮದ ಶಿರೂರು ಮೂರ್ಕೈಯಲ್ಲಿ ಮಟ್ಕಾ ಜುಗಾರಿ ನಿರತ ಆರೋಪದಲ್ಲಿ ಚಂದ್ರ ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಆತನಿಂದ 1,900 ರೂ. ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಗ್ರಹಿಸಿದ ಹಣವನ್ನು ವಂಡಾರಿನ ಪವನ ಎಂಬಾತನಿಗೆ ನೀಡುವುದಾಗಿ ಆರೋಪಿ ತಿಳಿಸಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

