ಮಂಗಳೂರು/ಬೆಂಗಳೂರು: ನಾಳೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಹಲವು ಸಂಘ ಸಂಸ್ಥೆಗಳು ಕರ್ನಾಟಕ ಬಂದ್ ಗೆ ಬೆಂಬಲವನ್ನೂ ವ್ಯಕ್ತಪಡಿಸಿದೆ.
ಮಾ.೨೨ ಅಂದರೆ ನಾಳೆ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಬಂದ್ ಇರೋದು ಖಚಿತವಾಗಿದೆ. ಈ ಸಂದರ್ಭ ಅಗತ್ಯ ಸೇವೆಗಳಾದ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು ಸಿಗಲಿದೆ. ಮತ್ತು ನಮ್ಮ ಮೆಟ್ರೋ ಎಂದಿನಂತೆ ಕಾರ್ಯಾಚರಿಸಲಿದೆ.
ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ ಇರುವುದರಿಂದ ಬಸ್ ಪ್ರಯಾಣದ ಕಥೆಯೇನು ಗೊತ್ತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಇತರ ಬಸ್ ಗಳು ಬಂದ್ ಗೆ ಬೆಂಬಲ ನೀಡುವುದನ್ನು ಸ್ಪಷ್ಟಪಡಿಸಿಲ್ಲ.

