ಮಂಗಳೂರು: ಹತ್ತನೇ ತರಗತಿಯ ಅಂತಿಮ ಪರೀಕ್ಷೆ ನಿನ್ನೆ ಶುರುವಾಗಿದ್ದು ಸಾಂಗವಾಗಿ ನೆರವೇರಿದೆ. ನಿನ್ನೆ ಪ್ರಥಮ ಭಾಷೆಯ ಪರೀಕ್ಷೆಗೆ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ವಿವಿಧ ಕಾರಣಗಳಿಂದ ಇನ್ನೂರ ಇಪ್ಪತ್ತೊಂಬತ್ತು ಮಂದಿ ವಿವಿಧ ಕಾರಣಗಳಿಂದ ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ತೊಂಭತ್ತೆರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಉಡುಪಿಯಲ್ಲಿ ಮೊದಲ ದಿನ ದುಷ್ಕರ್ಮಿಗಳು ಕಂಬದಕೋಣೆಯಲ್ಲಿ ಸಿಸಿ ಕ್ಯಾಮೆರಾ ಹಾಳು ಮಾಡಿದ ಘಟನೆ ಬಿಟ್ಟರೆ ಉಳಿದೆಡೆ ಸುಸೂತ್ರವಾಗಿ ನಡೆದಿದೆ.
ಉಡುಪಿಯಲ್ಲಿ ಒಟ್ಟು ಹದಿಮೂರು ಸಾವಿರದ ಎಂಟುನೂರ ಮೂವತ್ತು ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ಅಥವಾ ಡಿಬಾರ್ ಆಗಿರುವ ಪ್ರಕರಣ ದಾಖಲಾಗಿಲ್ಲ.

