ಬೇಸಿಗೆಕಾಲದಲ್ಲಿ ಮಾತ್ರ ಬೆಳೆಯುವ ಹಣ್ಣುಗಳಲ್ಲಿ ಲಿಚಿ ಹಣ್ಣು ಕೂಡಾ ಒಂದು. ಕೆಲವರಿಗೆ ಈ ಹಣ್ಣು ಅತ್ಯಂತ ರುಚಿ ಎನಿಸಿದ್ರೆ ಇನ್ನು ಕೆಲವರಿಗೆ ಆಗೋಲ್ಲ. ಆದರೆ ಸಮ್ಮರ್ ಸೀಸನ್ ನಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸೋದನ್ನು ಮಿಸ್ ಮಾಡ್ಲೇಬೇಡಿ. ಯಾಕಂದ್ರೆ ಇದು ಅಗರ್ಭವಾದ ಆರೋಗ್ಯ ಲಾಭಗಳನ್ನು ಹೊಂದಿದೆ.
ಲಿಚಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ತೊಂದರೆಯನ್ನು ಇದು ತಪ್ಪಿಸುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಕೂಡಾ ರಕ್ಷಣೆ ಮಾಡುತ್ತದೆ. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವುದರಿಂದ ಮಾನಸಿಕ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.
ಲಿಚಿ ಹಣ್ಣಿನಲ್ಲಿ ವಿಟಮಿನ್ ಸಿ ಪೋಷಕಾಂಶಗಳು ಇರುವುದರಿಂದ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚಿಸುತ್ತದೆ. ಕರುಳಿನ ಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುವುದರಿಂದ ಮಲಬದ್ಧತೆಯಂತಹ ಸಮಸ್ಯೆಗೂ ಇದು ಉಪಕಾರಿಯಾಗಿದೆ.
ಈ ಹಣ್ಣಿನಲ್ಲಿ ನೀರಿನ ಅಂಶ ಅಧಿಕವಾಗಿದೆ. ಆದ್ದರಿಂದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಸಮೃದ್ಧವಾದ ಆರೋಗ್ಯ ಗುಣಗಳಿರುವುದರಿಂದ ಈ ಹಣ್ಣು ಎಲ್ಲದಕ್ಕೂ ಪ್ರಯೋಜನಕಾರಿ.

