ಕುಂದಾಪುರ: ಕಳೆದ ಕೆಲವು ಸಮಯದಿಂದ ಹಳದಿ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕುಂದಾಪುರದ ಹಳ್ನಾಡು ಎಂಬಲ್ಲಿ ನಡೆದಿದೆ.
ಹಳ್ನಾಡು ಗ್ರಾಮದ ನಲ್ವತ್ತಮೂರು ವರ್ಷದ ಸುರೇಶ್ ಮೃತ ದುರ್ದೈವಿ. ಇವರು ಬೆಂಗಳೂರಿನಲ್ಲಿ ಇಪ್ಪತ್ತಾರು ವರ್ಷದಿಂದ ಕ್ಯಾಟರಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಇವರು ಆರೋಗ್ಯ ಸಮಸ್ಯೆಯಿಂದ ಊರಿಗೆ ಬಂದು ನೆಲೆಸಿದ್ದರು.
ದಿಢೀರ್ ಇವರು ತಲೆ ತಿರುಗಿ ಬಿದ್ದಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ರಾತ್ರಿ ಸಾವನ್ನಪ್ಪಿದ್ದಾರೆ. ಕುಂದಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


