ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಮಾರಕ ರೋಗಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ತುತ್ತಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಕರಾಟೆ ಲೆಜೆಂಡ್ ಎಂದೇ ಪ್ರಖ್ಯಾತರಾಗಿದ್ದ ತಮಿಳು ನಟನೋರ್ವ ಕ್ಯಾನ್ಸರ್ ನಿಂದಾಗಿ ನಿಧನರಾಗಿದ್ದಾರೆ.
ತಮಿಳು ನಟ ಶಿಹಾನ್ ಹುಸೈನಿ ಅವರು ಅನೇಕ ದಿನದಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇವರು ಕಮಲ್ ಹಾಸನ್, ರಜನಿಕಾಂತ್, ದಳಪತಿ ವಿಜಯ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶಿಹಾನ್ ಅವರ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. ಇವರ ನಿಧನಕ್ಕೆ ತಮಿಳು ಚಿತ್ರರಂಗ ಸೇರಿದಂತೆ ಸೆಲೆಬ್ರೆಟಿಗಳು, ಆಪ್ತರು, ಕುಟುಂಬಸ್ಥರು ಸಂತಾಪವನ್ನು ಸೂಚಿಸಿದ್ದಾರೆ.

