ಕುಂದಾಪುರ: ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಉಪವಿಭಾಗೀಯ ತಾಲ್ಲೂಕು ಇದರ ಹಿಂದಿನ ಆಡಳಿತ ವೈದ್ಯಾದಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರ ಮೇಲೆ ಕಿರುಕುಳಕ್ಕೆ ಸಂಬಂಧಿಸಿ ಆರೋಪವಿತ್ತು. ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿಗೆ ಮಾನಸಿಕ ಹಿಂಸೆ ನೀಡಿ, ದುರ್ನಡತೆ ತೋರಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ವೈದ್ಯರನ್ನು ಕಳೆದ ವರ್ಷ ಜೂನ್ ನಲ್ಲಿ ಅಮಾನತ್ತುಗೊಳಿಸಿ ಆದೇಶಿಸಲಾಗಿತ್ತು. ಇದೀಗ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತ್ತನ್ನು ವಿಖಂಡಗೊಳಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಇವರ ಲೀನ್ ಅನ್ನು ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯ ಕಿವಿ ಮತ್ತು ಮೂಗು ತಜ್ಞರ ಹುದ್ದೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ಅಮಾನತ್ತನ್ನು ವಿಖಂಡನೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲು ಮನವಿ ಮಾಡಿದ್ದಾರೆ.
ಇದೀಗ ವೈದ್ಯರ ಮನವಿಯನ್ನು ಪರಿಶೀಲಿಸಿ ಇವರ ಮೇಲಿರುವ ಆರೋಪಕ್ಕೆ ಇಲಾಖಾ ವಿಚಾರಣೆಗೆ ಬಾಕಿ ಇರಿಸಿ ಅಮಾನತ್ತನ್ನು ವಿಖಂಡನೆಗೊಳಿಸಿ ಈ ಕೂಡಲೇ ಜಾರಿಗೆ ಬರುವಂತೆ ಬೀದರ್ ನಲ್ಲಿ ಖಾಲಿ ಇರುವ ಕಿವಿ ಮತ್ತು ಮೂಗು ತಜ್ಞರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

