ಕೋಟ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ತೆಕ್ಕಟ್ಟೆ ಬಳಿ ಬುಧವಾರ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು
ಮಣೂರು ನಿವಾಸಿ ಪ್ರವೀಣ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 25 ಗ್ರಾಂ ತೂಕದ ಸುಮಾರು ರೂ. 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕೋಟ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಎ.ಎಸ್.ಐ ಜಯಪ್ರಕಾಶ್, ಹೆಡ್ ಕಾನ್ಸಟೇಬಲ್ ರೇವತಿ, ಕೃಷ್ಣ, ಶ್ರೀಧರ್, ಕಾನ್ಸಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ಉಪಸ್ಥಿತರಿದ್ದರು.


